ಸ್ಟ್ರಾಂಗ್ ರೂಂ ಸೇರಿತು ಅಭ್ಯರ್ಥಿಗಳ ಭವಿಷ್ಯ, ಎಲ್ಲಿದೆ ಗೊತ್ತಾ ಸ್ಟ್ರಾಂಗ್ ರೂಂ? ಹೇಗಿದೆ ಅಲ್ಲಿಯ ಭದ್ರತೆ?

ಶಿವಮೊಗ್ಗ ಲೈವ್.ಕಾಂ | 24 ಏಪ್ರಿಲ್ 2019

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ, ಸ್ಟ್ರಾಂಗ್ ರೂಂ ಸೇರಿವೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ಸ್ಥಾಪಿಸಲಾಗಿದೆ.

ಬೆಳಗ್ಗೆ ಸ್ಟ್ರಾಂಗ್ ರೂಂಗೆ ಸೀಲ್

ಎಲ್ಲಾ ಮತಗಟ್ಟೆಗಳಿಂದ ಆಗಮಿಸಿದ್ದ ಮತಯಂತ್ರಗಳನ್ನು, ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಇರಿಸಲಾಗಿದೆ. ಮತಯಂತ್ರಗಳನ್ನು ಇರಿಸಿರುವ ಕೊಠಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಬಾಗಿಲು ಕಿಟಕಿಗಳಿಗೆ ಪ್ಲೈವುಡ್ ಶೀಟ್’ನಿಂದ ಬಂದ್ ಮಾಡಲಾಗಿದೆ. ಹಾಗಾಗಿ ಮತಯಂತ್ರಗಳಿರುವ ಕೊಠಡಿಯೊಳಗೆ ಯಾರೂ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ನೇತೃತ್ವದಲ್ಲಿ ಮತಯಂತ್ರಗಳಿರುವ ಕೊಠಡಿಗಳನ್ನು ಸೀಲ್ ಮಾಡಲಾಗಿದೆ.

ಸ್ಟ್ರಾಂಗ್ ರೂಂಗೆ ಸೇನಾ ಭದ್ರತೆ

ಸಹ್ಯಾದ್ರಿ ಕಾಲೇಜಿನ ಕಲಾ ವಿಭಾಗದ ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ. ಕಟ್ಟಡದ ಸುತ್ತಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿ.ಎಸ್.ಎಫ್ ಯೋಧರಿಗೆ, ಸಹ್ಯಾದ್ರಿ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂ ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ. ಚುನಾವಣಾ ಕರ್ತವ್ಯನಿರತ ಅಧಿಕಾರಿಗಳನ್ನು ಹೊರತುಪಡಿಸಿ, ಉಳಿದ್ಯಾರಿಗೂ ಸ್ಟ್ರಾಂಗ್ ರೂಂ ಬಳಿ ಪ್ರವೇಶವಿಲ್ಲ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com