ವಿಜಯಪುರ- ಸರ್ಕಾರಿ ಮೆಡಿಕಲ್ ಕಾಲೇಜು ವಿರೋಧಿಸಿ ನಡೆದ ಹೋರಾಟದ ವೇಳೆ ವಿಜಯಪುರದಲ್ಲಿ ಅಹಿತಕರ ಘಟನೆ ನಡೆದಿದೆ. ಸಚಿವ ಎಂಬಿ ಪಾಟೀಲ್ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಗಲಾಟೆ ನಡೆದಿದೆ.
ಪ್ರತಿಭಟನೆಯ ಸಮಯದಲ್ಲಿ ಪೊಲೀಸರ ಮೊಬೈಲ್ಫೋನ್ ಕಸಿದುಕೊಂಡ ಘಟನೆಗೆ ಆಕ್ರೋಶಗೊಂಡ ಸ್ವಾಮೀಜಿ, ಪಿಎಸ್ಐಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಸಂಗನಬಸವೇಶ್ವರ ಸ್ವಾಮೀಜಿ ಅವರು ಪಿಎಸ್ಐ ಸೀತಾರಾಮ ಲಮಾಣಿ ಅವರಿಗೆ ಕಪಾಳ ಮೋಕ್ಷ ಮಾಡಿದ ಆರೋಪ ಕೇಳಿಬಂದಿದೆ.
ಕಪಾಳ ಮೋಕ್ಷ ಮಾಡಿದ ಸ್ವಾಮೀಜಿ ಬಸವನಬಾಗೇವಾಡಿ ತಾಲೂಕಿನ ಪಿ.ಬಿ. ಹುಣಶ್ಯಾಳ ಗ್ರಾಮದ ಮಠದ ಸ್ವಾಮೀಜಿ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಪೊಲೀಸರು ಸ್ವಾಮೀಜಿಯನ್ನು ವಾಹನದಲ್ಲಿ ಕರೆದುಕೊಂಡು ತೆರಳಿದ್ದಾರೆ.
ಈ ಘಟನೆ ವಿಜಯಪುರದಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

