ದಾಸೋಹರತ್ನ ದಾನೇಶ್ವರ ಸ್ವಾಮೀಜಿ ನಿಧನ- ಶೋಕದಲ್ಲಿ ಭಕ್ತ ಸಮೂಹ

ಬಾಗಲಕೋಟೆ ರಾಜ್ಯ

ಬಾಗಲಕೋಟೆ- ಬಾಗಲಕೋಟೆ ಜಿಲ್ಲೆಯ ಬಂಡಿಗಣಿ ಮಠದ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ (75) ಲಿಂಗೈಕ್ಯರಾಗಿದ್ದಾರೆ. ಶ್ರೀ ಬಸವಾಗೋಪಾಲ ನೀಲಮಾಣಿಕ್ಯ ಮಠದ ಸ್ವಾಮೀಜಿ.‌ ದಾಸೋಹ ‌ರತ್ನ ಎಂದೇ ಬಾಗಲಕೋಟೆ, ಬೆಳಗಾವಿ ‌ಹಾಗೂ ವಿಜಯಪುರ ಜಿಲ್ಲೆಯಲ್ಲಿ ಪ್ರಸಿದ್ಧರಾಗಿದ್ದರು. ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಮಠದ ಸ್ವಾಮೀಜಿ. ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದೇ ಚಿಕಿತ್ಸೆ ಫಲಿಸದೇ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ಶ್ರೀಗಳು ನಿಧನಕ್ಕೆ ಸಚಿವ ಆರ್ ಬಿ ತಿಮ್ಮಾಪುರ, ಶಾಸಕ ಬಾಲಚಂದ್ರ ಜಾರಕಿಹೊಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮಠಕ್ಕೆ ಸಿಎಂ ಸಿದ್ದರಾಮಯ್ಯ ಸಹ ಭೇಟಿ ನೀಡಿದ್ರು.

ಅನ್ನ ದಾಸೋಹದ ಮೂಲಕವೇ ಹೆಸರು ವಾಸಿಯಾಗಿದ್ದ ಶ್ರೀಗಳು ಉತ್ತರ ಕರ್ನಾಟಕದದಲ್ಲಿ ಅಸಂಖ್ಯಾತ ಭಕ್ತರನ್ನ ಹೊಂದಿರುವ ಸ್ವಾಮೀಜಿ. ಸ್ವಾಮೀಜಿ ನಿಧನದಿಂದ ಶೋಕ ಸಾಗರದಲ್ಲಿ ಲಕ್ಷಾಂತರ ಭಕ್ತರು. ಇಂದು ರಾತ್ರಿ 11 ಗಂಟೆಗೆ ಬಂಡಿಗಣಿ ಮಠಕ್ಕೆ ಆಗಮಿಸಲಿರುವ ಪಾರ್ಥಿವ ಶರೀರ.. ನಾಳೆ ಬೆಳಿಗ್ಗೆ 6 ಗಂಟೆಯಿಂದ ಭಕ್ತರ ಅಂತಿಮ ದರ್ಶನಕ್ಕೆ ವ್ಯವಸ್ಥೆ..‌ ಸಂಜೆ ನಾಲ್ಕು ಗಂಟೆಗೆ ಮಠದ ಬಳಿ ಅಂತಿಮ ವಿಧಿವಿಧಾನ ನಡೆಸಲು ಮಠದ ಪ್ರಮುಖರು ತೀರ್ಮಾನ ಮಾಡಿದ್ದಾರೆ.