
ಬೆಂಗಳೂರು- ನಾಯಕತ್ವ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಜೋರಾಗಿದೆ. ಗೊಂದಲಕ್ಕೆ ಬ್ರೇಕ್ ಹಾಕುವ ಯತ್ನಕ್ಕೆ ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಸಿಎಂ ನಿವಾಸಕ್ಕೆ ತೆಳಿದ ಡಿಸಿಎಂ ಡಿ ಕೆ ಶಿವಕುಮಾರ್
ಬಿಸಿ ಬಿಸಿ ಚರ್ಚೆ ಮಾಡುತ್ತಾ ಕೂಲ್ ಲುಕ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಬಿರುಗಾಳಿ ಸೃಷ್ಟಿಸಿದೆ. ಸಿಎಂ, ಡಿಸಿಎಂ ನಡುವೆ ಎರಡು ವರ್ಷಗಳ ಅಧಿಕಾರಿ ಒಪ್ಪಂದ ಆಗಿದೆ ಎಂಬ ಚರ್ಚೆ ಜೋರಾಗಿದೆ. ಸಿಎಂ ಸ್ಥಾನಕ್ಕಾಗಿ ಡಿಕೆಶಿ ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ. ಆಪ್ತ ಸಚಿವರು, ಶಾಸಕರು ದೆಹಲಿ ಪ್ರವಾಸ ಆಯಿತು. ಬಳಿಕ ಹೇಳಿಕೆ, ಪ್ರತಿ ಹೇಳಿಕೆಗಳು ಸಹ ಬಂದವು. ಇದರಿಂದ ಕಾಂಗ್ರೆಸ್ ಗೆ ಡ್ಯಾಮೆಜ್ ಆಗೋದು ಅರಿವಿಗೆ ಬಂದಿದೆ. ಈಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಕುಳಿತು ಮಾತನಾಡೊ ನಿರ್ಧಾರಕ್ಕೆ ಬಂದಿದ್ದಾರೆ. ಈ ಭಾಗವಾಗಿ ಇಂದು ಇಬ್ಬರು ಬ್ರೇಕ್ ಫಾಸ್ಟ್ ಮಿಟಿಂಗ್ ನಡೆಸಿದ್ದಾರೆ.
