ಬೆಳಗಾವಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ ನಿರ್ಣಯ
ಬೆಳಗಾವಿ- ಡಿಸೆಂಬರ್ 9 ರಂದು ಬೆಳಗಾವಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರ ಹೋರಾಟ ನಡೆಯಲಿದೆ. 20 ಸಾವಿರಕ್ಕೂ ಹೆಚ್ಚು ರೈತರು ರಾಜ್ಯಾದ್ಯಂತ ಬರಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ, ಆರ್. ಅಶೋಕ ನೇತೃತ್ವದಲ್ಲಿ ಹೋರಾಟ ಮಾಡ್ತಿವಿ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಕುರ್ಚಿ ಉಳಿಸಿಕೊಳ್ಳಲು ಸಮಯ ಹಾಳು ಮಾಡುತ್ತಿದೆ. ರೈತರಿಗೆ ನ್ಯಾಯ ಒದಗಿಸಲು ನಾವು ಹೋರಾಟ ಮಾಡ್ತಿವಿ. ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ಹಣವನ್ನ ಬಸವರಾಜ್ ಬೋಮ್ಮಾಯಿ ಇದ್ದಾಗ ಮಂಜೂರು ಮಾಡಿದ್ರು. ಆ ಹಣವನ್ನ ಈವರೆಗೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ರು.
ಇನ್ನೂ ಸರ್ಕಾರದಿಂದ KMFಗೆ ಬರಬೇಕಿದ್ದ 620 ಕೋಟಿ ರೈತರ ಪ್ರೋತ್ಸಾಹ ಹಣ ಬಂದಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆ ಗಮನ ಸೆಳೆಯಲು ಮೂರು ಕಿಲೋ ಮೀಟರ್ ಪ್ರತಿಭಟನಾ ಪಾದಯಾತ್ರೆ ಮಾಡ್ತಿವಿ ಎಂದ ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.
