ನನ್ನ ದುಡ್ಡಿನಲ್ಲಿ ಎಷ್ಟು ಬೇಕಾದರೂ ವಾಚ್ ತೆಗೆದುಕೊಳ್ಳುವ ಶಕ್ತಿ ನನಗೆ ಇದೆ – ಡಿಕೆಶಿ ಟಾಂಗ್!

Letest Post ರಾಜ್ಯ ಹಾಸನ

ಹಾಸನ- ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬ್ರೇಕ್‌ಫಾಸ್ಟ್ ಮೀಟಿಂಗ್ ವೇಳೆ ಧರಿಸಿದ್ದ ವಾಚ್ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ವಿರೋಧ ಪಕ್ಷಗಳು ಸಹ ಇದರ ಬಗ್ಗೆ ಧ್ವನಿ ಎತ್ತಿದ್ದವು. ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಎಷ್ಟು ಬೇಕಾದರೂ ವಾಚ್ ತೆಗೆದುಕೊಳ್ಳುವ ಶಕ್ತಿ ನನಗೆ ಇದೆ. ಯಾರ ಪ್ಯಾಂಟ್ ಹಾಕ್ತಾರೆ, ಯಾರು ವಾಚ್ ಹಾಕ್ತಾರೆ, ಯಾರು ಕನ್ನಡಕ ಹಾಕ್ತಾರೆ ಎಂದು ಪ್ರಶ್ನೆ ಮಾಡಲು ನಾನು ಹೋಗಲ್ಲ. ಅದು ಅವರ ವೈಯಕ್ತಿಕ ಆಸೆಗಳು ಎಂದರು.

ನಾನು ಸಾವಿರ ರೂಪಾಯಿಯ ವಾಚ್ ಆದರೂ ಕಟ್ಟುತ್ತೇನೆ, ಒಂದು ಲಕ್ಷ ಮೌಲ್ಯದ ವಾಚ್ ಆದರೂ ಕಟ್ಟುತ್ತೇನೆ. ಅದು ನನ್ನ ಆಸ್ತಿ, ನನ್ನ ಸಂಪಾದನೆ, ನನ್ನ ಶ್ರಮ ಎಂದರು. ಏನೋ ವಿರೋಧ ಪಕ್ಷದವರಿಗೆ ಗೊತ್ತಿಲ್ಲದೇ ಮಾತನಾಡಿದ್ದಾರೆ ಬಿಡಿ. ಬಿಜೆಪಿ ನಾಯಕರಿಗೆ ನನ್ನ ವ್ಯವಹಾರ ಏನು ಎಂಬುದು ಗೊತ್ತಿದೆ ಎಂದು ಟಾಂಗ್ ಕೊಟ್ಟರು.