ಖುರ್ಚಿ ಫೈಟ್- ಕರೆಸಿ ಮಾತನಾಡ್ತಿವಿ ಎಂದ ಖರ್ಗೆ!

Letest Post ರಾಜಕೀಯ ರಾಜ್ಯ

ಡಿಕೆಶಿ- ಸಿದ್ದರಾಮಯ್ಯ ಫೈಟ್

ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಬೆಂಗಳೂರು- ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಕಾಂಗ್ರೆಸ್ ವಲಯದಲ್ಲಿ ತಲ್ಲಳ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ಸಿಎಂ ಖುರ್ಚಿಗಾಗಿ ಫೈಟ್ ನಡೆಯುತ್ತಿದೆ. ಈ ಫೈಟ್ ಈಗ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಪ್ರಮುಖರನ್ನು ಕರೆದು ಮಾತನಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇಬ್ಬರನ್ನು ದೆಹಲಿಗೆ ಕರೆದು ಮಾತನಾಡುತ್ತೇವೆ. ಅಲ್ಲಿಯೇ ಇತ್ಯರ್ಥ ಪಡಿಸುತ್ತೇವ ಎಂದು ಹೇಳಿದ್ದಾರೆ. ಖರ್ಗೆಯವರು ರಾಜ್ಯದವರೇ ಆಗಿರೋ ಕಾರಣಕ್ಕೆ ಎಲ್ಲಾ ವಿಚಾರಗಳು ಅವರ ಗಮನದಲ್ಲಿ ಇವೆ. ಇನ್ನೂ ಅನೇಕ ಸಚಿವರು ಹಾಗೂ ಶಾಸಕರು ಭೇಟಿಯಾಗಿ ಇನ್ ಸೈಡ್ ಮಾಹಿತಿಯನ್ನು ಸಹ ನೀಡಿದ್ದಾರೆ. ಹೀಗಾಗಿ ಖರ್ಗೆ ಹಾಗೂ ರಾಹುಲ್ ಗಾಂಧಿಯಾವ ನಿರ್ಧಾರ ಮಾಡ್ತಾರೆ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.