ಬೆಳಗಾವಿ- ಬೆಳಗಾವಿಯಲ್ಲಿ ಇತ್ತೀಚಿಗೆ ಬೃಹತ್ ಸೈಬರ್ ವಂಚನೆ ಜಾಲ ಪತ್ತೆಯಾಗಿತ್ತು. ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಇಲ್ಲಿನ ಪೊಲೀಸರು ಬೇಧಿಸಿದ್ರು. 28 ಜನ ಆರೋಪಿಗಳನ್ನು ಬಂಧಿಸಿ 37 ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣ ಅಂತರಾಷ್ಟ್ರೀಯ ಜಾಲ ಹೊಂದಿದ್ದ ಕಾರಣಕ್ಕೆ ಈ ಕೇಸ್ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಅಜಂನ ನಗರ ಕಾಲ್ ಸೆಂಟರ್ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಬೆಚ್ಚಿ ಬಿಳಿಸುವ ವಿಷಯಗೊತ್ತಾಗಿತ್ತು. ದೇಶದ ವಿವಿಧ ಮೂಲೆಗಳಿಂದ ಇಲ್ಲಿಗೆ ಬಂದಿದ್ದ ಅನೇಕರು ಅಮೆರಿಕೆ ಪ್ರಜೆಗನ್ನು ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದರು. ಇನ್ಸಪೆಕ್ಟರ್ ಬಿ ಆರ್ ಗಡ್ಡೇಕರ್ ನೇತೃತ್ವದಲ್ಲಿ ಬೃಹತ್ ದಾಳಿ ಮಡಲಾಗಿತ್ತು. ಇನ್ನೂ ಸೈಬರ್ ವಂಚನೆಯ ಕಿಂಗ್ ಪಿನ್ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಬೆಳಗಾವಿಯಲ್ಲಿ ಕುಳಿತುಕೊಂಡು ಅಮೆರಿಕ ಪ್ರಜೆಗಳಿಗೆ ರೀತಿಯಲ್ಲಿ ವಂಚನೆ ಮಾಡಿದ್ದಾರೆ. ಡಾರ್ಕ್ ವೆಬ್ ಬಳಸಿಕೊಂಡು ಕೃತ್ಯ ಎಸಗಲಾಗಿದ್ದು, ಸದ್ಯ ಪ್ರಕರಣ ಬೃಹತ್ ಜಾಲ ಹಿನ್ನೆಲೆಯಲ್ಲಿ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.

