ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ- ಭಗವದ್ಗೀತೆ ಪಠಣ

Letest Post ಉಡುಪಿ

ಉಡುಪಿ- ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ‌. ಮಧ್ಯಾಹ್ನ 12 ಗಂಟೆಗೆ ಬರೋ ಪ್ರಧಾನಿ, ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಸ್ತ್ರೋತ ಪಠಣ ಮಾಡಲಿದ್ದಾರೆ. ಉಡುಪಿಗೆ ಪ್ರಧಾನಿ ಭೇಟಿ ಹಿನ್ನೆಲೆ ಬೀಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ಮೋದಿ ಸ್ವಾಗತಕ್ಕೆ ವಿಭಿನ್ನ ವೇಷ ತೊಟ್ಟು ಅಭಿಮಾನಿಗಳ‌ ಸಿದ್ಧತೆ ಮಾಡಿಕೊಂಡಿದ್ದಾರೆ‌ ಸಂತ ತುಕರುರಾಮ-ಪಾಂಡುರಗ ವಿಠಲ ವೇಷ ತೊಟ್ಟು ಸಂಭ್ರಮದಲ್ಲಿ ಇದ್ದಾರೆ. ಇನ್ನೂ ಮೋದಿ ರೋಡ್ ಶೋ ನಡೆಸುವ ವೇಳೆ ವೇಷ ತೊಟ್ಟು ನೃತ್ಯ ಮಾಡಲಿರುವ ಕಲಾವಿದರು ತಯಾರಿ ಮಾಡಿದ್ದಾರೆ.

ಇಂದು ಪ್ರಧಾನಿ ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿದ್ದಾರೆ. 15 ನೇ ಅಧ್ಯಾಯ, ಪುರುಷೋತ್ತಮ ಯೋಗ ಪಠಣ. ಮೋದಿಯೊಂದಿಗೆ ಸಾವಿರಾರು ಮಂದಿ ಶ್ಲೋಕ ಪಠಣ ಮಾಡಲಿದ್ದಾರೆ. ಬೆಳಗ್ಗೆನಿಂದಲೇ ಶ್ಲೋಕ ಪಠಿಸುತ್ತಾ ಕುಳಿರುಕೊಂಡಿರುವ ಭಕ್ತರು. ವೇದಿಕೆ ಮುಂಭಾಗದಲ್ಲಿ ನೆಲದಲ್ಲಿ ಕುಳಿತು ಭಕ್ತರಿಂದ ಶ್ಲೋಕ ಪಠಣೆ. ವೇದಿಕೆಯಲ್ಲಿ ಸಾವಿರಾರು ಭಕ್ತರಿಂದ ಏಕಕಾಲದಲ್ಲಿ ಶ್ಲೋಕ ಪಠಣೆ.