ಕಾಂತಾರಾ ಚಾಪ್ಟರ್-1 ಚಿತ್ರ ಸಕ್ಸಸ್- ಹರಕೆ ತೀರಿಸಲು ಮಂಗಳೂರಿಗೆ ಬಂದ ಚಿತ್ರತಂಡ

ಮಂಗಳೂರು- ಕಾಂತಾರ ಚಾಪ್ಟರ್ 1 ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಹರಕೆ ತೀರಿಸಲು ಚಿತ್ರತಂಡ ಇಂದು ಮಂಗಳೂರಿಗೆ ಭೇಟಿ ನೀಡಿತು. ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ಮಾಡಲಾಯಿತು. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ನಡೆಯಿತು. ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಭಾಗಿಯಾದ ಚಿತ್ರತಂಡ ಜೊತೆಗೆ ಪತ್ನಿ ಮಕ್ಕಳ ಜೊತೆ ನೇಮೋತ್ಸವಕ್ಕೆ ರಿಷಬ್ ಶೆಟ್ಟಿ ಬಂದಿದ್ರು. ನೇಮೋತ್ಸವ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ನಿರ್ಮಾಪಕ ವಿಜಯ್ […]

ಮತ್ತಷ್ಟು ಓದಿ

ಗೋಕಾಕ, ಚಿಕ್ಕೋಡಿ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗ್ರಹ

ಗೋಕಾಕ- ಭೌಗೋಳಿಕವಾಗಿ ದೊಡ್ಡದಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ತಾಲ್ಲೂಕು ಕೇಂದ್ರಗಳನ್ನು ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಸುಮಾರು 40 ವರ್ಷಗಳಿಂದ ಗೋಕಾಕ ಜಿಲ್ಲಾ ರಚನೆಗಾಗಿ ನಮ್ಮವರು ಅನೇಕ ಹೋರಾಟಗಳನ್ನು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಜಿಲ್ಲಾ ರಚನೆಗಾಗಿ ನೇಮಿಸಿದ್ದ ನಾಲ್ಕೂ ಆಯೋಗಗಳು ಸಹ ಆಡಳಿತದ ಹಿತದೃಷ್ಟಿಯಿಂದಬೆಳಗಾವಿಯನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ರಚನೆ ಮಾಡುವಂತೆಯೂ ಅಂದಿನ ಸರ್ಕಾರಗಳಿಗೆ ಶಿಫಾರಸ್ಸು ಮಾಡಿದ್ದವು. ಗೋಕಾಕ ಜಿಲ್ಲಾ […]

ಮತ್ತಷ್ಟು ಓದಿ

ಬೆಳಗಾವಿ ಅಧಿವೇಶನದ ಮೊದಲ ದಿನವೇ ಸರ್ಕಾರದ ವಿರುದ್ಧ ಹೋರಾಟ- ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ ನಿರ್ಣಯ ಬೆಳಗಾವಿ- ಡಿಸೆಂಬರ್ 9 ರಂದು ಬೆಳಗಾವಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರ ಹೋರಾಟ ನಡೆಯಲಿದೆ. 20 ಸಾವಿರಕ್ಕೂ ಹೆಚ್ಚು ರೈತರು ರಾಜ್ಯಾದ್ಯಂತ ಬರಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ, ಆರ್. ಅಶೋಕ ನೇತೃತ್ವದಲ್ಲಿ ಹೋರಾಟ ಮಾಡ್ತಿವಿ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ‌. ಕಾಂಗ್ರೆಸ್ ಸರ್ಕಾರ ಕುರ್ಚಿ ಉಳಿಸಿಕೊಳ್ಳಲು ಸಮಯ ಹಾಳು ಮಾಡುತ್ತಿದೆ. ರೈತರಿಗೆ ನ್ಯಾಯ ಒದಗಿಸಲು ನಾವು ಹೋರಾಟ ಮಾಡ್ತಿವಿ. ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗೆ […]

ಮತ್ತಷ್ಟು ಓದಿ

ವೇಣುಗೋಪಾಲ್ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ: CM ಸಿದ್ದರಾಮಯ್ಯ

ಮಂಗಳೂರು- ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ರಾಜಕೀಯ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಗಳೂರಿನ ಉಭಯ ನಾಯಕರ ಭೇಟಿ ಸಂದರ್ಭದಲ್ಲಿ ಚರ್ಚೆ ಆಗಿದೆ ಎನ್ನಲಾಗಿತ್ತು. ಬಳಿಜ ಸಿಎಂ ಮಾಧ್ಯಮದವರೊಂದಿಗೆ ಮಾತನಾಡಿದರು. ಇಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಕರೆದರೆ ಮಾತ್ರ ದೆಹಲಿಗೆಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಹೋಗುವುದಕ್ಕೆ ಯಾರೂ ಬೇಡ ಅಂದಿಲ್ಲ. ನೀವು ದೆಹಲಿಗೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾನು ಹೋಗುವುದಿಲ್ಲ. ನನ್ನನು […]

ಮತ್ತಷ್ಟು ಓದಿ

ಬೆಳಗಾವಿಯ ಸುವರ್ಣ ಸೌಧದ ಸುತ್ತಮುತ್ತ ನಾಳೆಯಿಂದಲೇ ನಿಷೇಧಾಜ್ಞೆ ಜಾರಿ!

ಬೆಳಗಾವಿ- ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ 8ರಿಂದ 21ರ ವರೆಗೆ ಚಳಿಗಾಲದ ಅಧಿವೇಶನಕ್ಕೆ ಈಗಾಗಲೇ ಮೂಹುರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ ಸುವರ್ಣ ಸೌಧದ ಸುತ್ತಮುತ್ತ ಮೂರು ಕಿ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಆದೇಶ ಹೊರಡಿಸಿದ್ದಾರೆ. ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿವಿಧ ಸಂಘ- ಸಂಸ್ಥೆಗಳು ರೆಡಿಯಾಗಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರ ಪೊಲೀಸ್ ಆಯುಕ್ತರು ನಾಳೆಯಿಂದಲೇ ಡಿಸೆಂಬರ್ […]

ಮತ್ತಷ್ಟು ಓದಿ

ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ- ಭಗವದ್ಗೀತೆ ಪಠಣ

ಉಡುಪಿ- ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ‌. ಮಧ್ಯಾಹ್ನ 12 ಗಂಟೆಗೆ ಬರೋ ಪ್ರಧಾನಿ, ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಸ್ತ್ರೋತ ಪಠಣ ಮಾಡಲಿದ್ದಾರೆ. ಉಡುಪಿಗೆ ಪ್ರಧಾನಿ ಭೇಟಿ ಹಿನ್ನೆಲೆ ಬೀಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೆ ವಿಭಿನ್ನ ವೇಷ ತೊಟ್ಟು ಅಭಿಮಾನಿಗಳ‌ ಸಿದ್ಧತೆ ಮಾಡಿಕೊಂಡಿದ್ದಾರೆ‌ ಸಂತ ತುಕರುರಾಮ-ಪಾಂಡುರಗ ವಿಠಲ ವೇಷ ತೊಟ್ಟು ಸಂಭ್ರಮದಲ್ಲಿ ಇದ್ದಾರೆ. ಇನ್ನೂ ಮೋದಿ ರೋಡ್ ಶೋ ನಡೆಸುವ ವೇಳೆ ವೇಷ ತೊಟ್ಟು ನೃತ್ಯ ಮಾಡಲಿರುವ ಕಲಾವಿದರು ತಯಾರಿ […]

ಮತ್ತಷ್ಟು ಓದಿ

ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ- ರಂಭಾಪುರಿಶ್ರೀ

ಚಿಕ್ಕಮಗಳೂರು- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ಹಲವು ಬೆಳವಣಿಗೆ ನಡೆಯುತ್ತಿವೆ. ಈ ನಡುವೆ ಅನೇಕ ಮಠಾದೀಶರು ಕೂಡ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಪರ ಬ್ಯಾಟ್ ಬೀಸುತ್ತಿದ್ದಾರೆ. ಆದರೇ ಯಾವ ಸ್ವಾಮೀಜಿ ಏನಾದ್ರು ಮಾತನಾಡಲಿ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶ್ರೀಗಳು ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ರಂಭಾಪುರಿಯಲ್ಲಿ ಇರೋ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸುವ ಪ್ರಯತ್ನ ಮಾಡಿದ್ರು. ಆದರೆ ಇದಕ್ಕೆ ಉತ್ತರಿಸಿದ […]

ಮತ್ತಷ್ಟು ಓದಿ

ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ಸೈಬರ್ ವಂಚನೆ- ಪ್ರಕರಣ ಸಿಐಡಿಗೆ ಹಸ್ತಾಂತರ

ಬೆಳಗಾವಿ- ಬೆಳಗಾವಿಯಲ್ಲಿ ಇತ್ತೀಚಿಗೆ ಬೃಹತ್ ಸೈಬರ್ ವಂಚನೆ ಜಾಲ ಪತ್ತೆಯಾಗಿತ್ತು. ಬೆಳಗಾವಿಯಲ್ಲಿ ಕುಳಿತು ಅಮೆರಿಕ ಪ್ರಜೆಗಳಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಇಲ್ಲಿನ ಪೊಲೀಸರು ಬೇಧಿಸಿದ್ರು. 28 ಜನ ಆರೋಪಿಗಳನ್ನು ಬಂಧಿಸಿ 37 ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣ ಅಂತರಾಷ್ಟ್ರೀಯ ಜಾಲ ಹೊಂದಿದ್ದ ಕಾರಣಕ್ಕೆ ಈ ಕೇಸ್ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಅಜಂನ ನಗರ ಕಾಲ್ ಸೆಂಟರ್ ಮೇಲೆ ದಾಳಿ […]

ಮತ್ತಷ್ಟು ಓದಿ

ಖುರ್ಚಿ ಫೈಟ್- ಕರೆಸಿ ಮಾತನಾಡ್ತಿವಿ ಎಂದ ಖರ್ಗೆ!

ಡಿಕೆಶಿ- ಸಿದ್ದರಾಮಯ್ಯ ಫೈಟ್ ಬೆಂಗಳೂರು- ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಕಾಂಗ್ರೆಸ್ ವಲಯದಲ್ಲಿ ತಲ್ಲಳ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನಡುವೆ ಸಿಎಂ ಖುರ್ಚಿಗಾಗಿ ಫೈಟ್ ನಡೆಯುತ್ತಿದೆ. ಈ ಫೈಟ್ ಈಗ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಪ್ರಮುಖರನ್ನು ಕರೆದು ಮಾತನಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇಬ್ಬರನ್ನು ದೆಹಲಿಗೆ ಕರೆದು ಮಾತನಾಡುತ್ತೇವೆ. ಅಲ್ಲಿಯೇ ಇತ್ಯರ್ಥ ಪಡಿಸುತ್ತೇವ ಎಂದು ಹೇಳಿದ್ದಾರೆ. ಖರ್ಗೆಯವರು ರಾಜ್ಯದವರೇ ಆಗಿರೋ ಕಾರಣಕ್ಕೆ […]

ಮತ್ತಷ್ಟು ಓದಿ